ಚಿರತೆಯು ಜನ ನಿಬಿಡ ಪ್ರದೇಶಕ್ಕೆ ಬಂದಾಗಿನ ಸಂದರ್ಭಗಳನ್ನು ನಿಭಾಯಿಸುವಲ್ಲಿ ವಿವಿಧಸಂಸ್ಥೆಗಳು ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳನ್ನು ಈ ಕೈಪಿಡಿಯಲ್ಲಿ ನೀಡಲಾಗಿದೆ. ಚಿರತೆ ಪಟ್ಟಣ, ಗ್ರಾಮದಂತಹ ವಸತಿ ಪ್ರದೇಶಕ್ಕೆ ಬಂದಾಗ,ಚಿರತೆಯುನೀರಿರುವ ಅಥವಾ ನೀರಿಲ್ಲದ ಬಾವಿಗೆ ಬಿದ್ದಾಗ ಮತ್ತು ಚಿರತೆಯು ಉರುಳಿಗೆ ಸಿಕ್ಕಿಕೊಂಡಸಂದರ್ಭಗಳನ್ನು ಪ್ರಾಯೋಗಿಕವಾಗಿ ನಿಭಾಯಿಸುವ ಬಗೆಗಿನ ಮಾಹಿತಿಯನ್ನು ಇದರಲ್ಲಿ ನೀಡಲಾಗಿದೆ.
ಚಿರತೆಗಳು ಜನ ನಿಬಿಡ ಪ್ರದೇಶಕ್ಕೆ ಬರುವ ಸನ್ನಿವೇಶಗಳನ್ನು ಆಗಾಗ್ಗೆ ಎದುರಿಸುವಪ್ರದೇಶಗಳಲ್ಲಿ ಅರಣ್ಯ ಇಲಾಖೆ ಮತ್ತು ವಿವಿಧ ಸಂಸ್ಥೆಗಳು ಇಟ್ಟುಕೊಳ್ಳಬೇಕಾದ ಉಪಕರಣಗಳಮಾಹಿತಿಯನ್ನು ಸಹ ಕೈಪಿಡಿಯಲ್ಲಿ ನೀಡಲಾಗಿದೆ. ಕರ್ನಾಟಕ ಸರ್ಕಾರದಿಂದ ವನ್ಯಜೀವಿ ಹಾವಳಿಗೆಪರಿಹಾರ ನೀಡುವ ಪ್ರಕ್ರಿಯೆಯ ಬಗ್ಗೆ, ಒಂದು ಪ್ರದೇಶದಲ್ಲಿ ಚಿರತೆಯಇರುವಿಕೆಯನ್ನು ಧೃಡಪಡಿಸಿಕೊಳ್ಳುವ ಬಗ್ಗೆ,ಅಧಿಕ ಸಂಘರ್ಷಇರುವ ಪ್ರದೇಶಗಳಲ್ಲಿ ಅರಿವು ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಹಮಾಹಿತಿಯನ್ನು ನೀಡಲಾಗಿದೆ.