Book
2016
ಕರ್ನಾಟಕ ವನ್ಯಜೀವಿ ಜಾಲದ ಗಣಿ ಚಾಮರಾಜನಗರ ಜಿಲ್ಲೆ (A handbook on wildlife of Chamarajanagar district  specifically on MM Hills and Cauvery Wildlife Sanctuaries - in Kannada)
Sanjay Gubbi, Girish Babu
September 2016
Download

PDF, 19.7 MB

ಈ ಕಿರುಹೊತ್ತಿಗೆಯಲ್ಲಿ, ಕೈ ಬರಹದ ಚಿತ್ರಗಳೊಂದಿಗೆ, ಚಾಮರಾಜನಗರ ಜಿಲ್ಲೆಯ ವನ್ಯಜೀವಿಗಳ ಕಿರುನೋಟವನ್ನು ನೀಡಲಾಗಿದೆ ಹಾಗೂ ಈ ಜಿಲ್ಲೆಯ ಕಾಡಿನಲ್ಲಿರುವ ಕೆಲವು ಅಪೂರ್ವ ವನ್ಯಜೀವಿಗಳ ವಿವರಗಳನ್ನು ಸಹ ನೀಡಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿರುವ ಕಾವೇರಿ ಮತ್ತು ಮಲೈ ಮಹದೇಶ್ವರ ವನ್ಯಜೀವಿಧಾಮಗಳ ಪ್ರಾಮುಖ್ಯತೆಯನ್ನು ತಿಳಿಸಿ ಈ ಪ್ರದೇಶಗಳು ಹುಲಿಯಂತಹ ಪ್ರಮುಖ ವನ್ಯಜೀವಿಯ ಜೊತೆಗೆ ಇನ್ನೂ ಅನೇಕ ವನ್ಯಜೀವಿಗಳ ಸಂಖ್ಯೆ ಅಭಿವೃದ್ದಿ ಹೊಂದುವ ಸಾಧ್ಯತೆಯನ್ನು ವಿವರಿಸಲಾಗಿದೆ. ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಸಂಪರ್ಕ ಕಲ್ಪಿಸುವ ವನ್ಯಜೀವಿ ಪಥಗಳ ಅವಶ್ಯಕತೆ ಮತ್ತು ಅವುಗಳನ್ನು ಸಂರಕ್ಷಿಸುವ ಅಗತ್ಯತೆಗಳ ಬಗ್ಗೆ ನಿದರ್ಶನಗಳ ಮೂಲಕ ತಿಳಿಸಲಾಗಿದೆ. ಈ ಜಿಲ್ಲೆಯ ಕಾಡುಗಳು ಅನೇಕ ಜನ ಸಮುದಾಯಗಳ ವಾಸಸ್ಥಾನಗಳಾಗಿದ್ದು, ಈ ಸಮುದಾಯಗಳ ಕಾಡಿನ ಮೇಲಿನ ಅವಲಂಬನೆಯ ಬಗ್ಗೆ ಕೂಡ ಈ ಕಿರುಹೊತ್ತಿಗೆಯಲ್ಲಿ ವಿವರಿಸಲಾಗಿದೆ. ಈ ಕಾಡುಗಳು ಅನೇಕ ಪ್ರದೇಶಗಳಿಗೆ ನೀರಿನ ಮೂಲವಾಗಿದ್ದು, ಇದು ಈ ಕಾಡುಗಳ ಮೌಲ್ಯವನ್ನು ತಿಳಿಸುತ್ತದೆ. ಕೊನೆಗೆ ಈ ಕಾಡುಗಳಿಗೆ ಮತ್ತು ವನ್ಯಜೀವಿಗಳಿಗಿರುವ ಮುಖ್ಯ ಕುತ್ತುಗಳನ್ನು ಈ ಕಿರುಹೊತ್ತಿಗೆಯಲ್ಲಿ ವಿವರಿಸಲಾಗಿದೆ.

Did you know your internet explorer is out of date?

To access our website you should upgrade to a newer version or other web browser.

How to do that »