Report
2016
ಚಿರತೆಗಳು ಜನ ನಿಬಿಡ ಪ್ರದೇಶಗಳನ್ನು ಪ್ರವೇಶಿಸಿದ ಸನ್ನಿವೇಶಗಳನ್ನು ಸುರಕ್ಷಿತವಾಗಿ ನಿಭಾಯಿಸುವ ವಿಧಾನಗಳು (Safely handling situations when leopards enter human dense areas - Kannada version)
October 2016

ಚಿರತೆಯು ಜನ ನಿಬಿಡ ಪ್ರದೇಶಕ್ಕೆ ಬಂದಾಗಿನ ಸಂದರ್ಭಗಳನ್ನು ನಿಭಾಯಿಸುವಲ್ಲಿ ವಿವಿಧ ಸಂಸ್ಥೆಗಳು ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳನ್ನು ಈ ಕೈಪಿಡಿಯಲ್ಲಿ ನೀಡಲಾಗಿದೆ. ಚಿರತೆ ಪಟ್ಟಣ, ಗ್ರಾಮದಂತಹ ವಸತಿ ಪ್ರದೇಶಕ್ಕೆ ಬಂದಾಗ, ಚಿರತೆಯು ನೀರಿರುವ ಅಥವಾ ನೀರಿಲ್ಲದ ಬಾವಿಗೆ ಬಿದ್ದಾಗ ಮತ್ತು ಚಿರತೆಯು ಉರುಳಿಗೆ ಸಿಕ್ಕಿಕೊಂಡ ಸಂದರ್ಭಗಳನ್ನು ಪ್ರಾಯೋಗಿಕವಾಗಿ ನಿಭಾಯಿಸುವ ಬಗೆಗಿನ ಮಾಹಿತಿಯನ್ನು ಇದರಲ್ಲಿ ನೀಡಲಾಗಿದೆ.

ಚಿರತೆಗಳು ಜನ ನಿಬಿಡ ಪ್ರದೇಶಕ್ಕೆ ಬರುವ ಸನ್ನಿವೇಶಗಳನ್ನು ಆಗಾಗ್ಗೆ ಎದುರಿಸುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಮತ್ತು ವಿವಿಧ ಸಂಸ್ಥೆಗಳು ಇಟ್ಟುಕೊಳ್ಳಬೇಕಾದ ಉಪಕರಣಗಳ ಮಾಹಿತಿಯನ್ನು ಸಹ ಕೈಪಿಡಿಯಲ್ಲಿ ನೀಡಲಾಗಿದೆ. ಕರ್ನಾಟಕ ಸರ್ಕಾರದಿಂದ ವನ್ಯಜೀವಿ ಹಾವಳಿಗೆ ಪರಿಹಾರ ನೀಡುವ ಪ್ರಕ್ರಿಯೆಯ ಬಗ್ಗೆ, ಒಂದು ಪ್ರದೇಶದಲ್ಲಿ ಚಿರತೆಯ ಇರುವಿಕೆಯನ್ನು ಧೃಡಪಡಿಸಿಕೊಳ್ಳುವ ಬಗ್ಗೆ, ಅಧಿಕ ಸಂಘರ್ಷ ಇರುವ ಪ್ರದೇಶಗಳಲ್ಲಿ ಅರಿವು ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಹ ಮಾಹಿತಿಯನ್ನು ನೀಡಲಾಗಿದೆ.

Did you know your internet explorer is out of date?

To access our website you should upgrade to a newer version or other web browser.

How to do that »